10 Myths You Shouldn't Beleive About Corona Virus | Boldsky Kannada

2020-03-20 395

ವಿಶ್ವದೆಲ್ಲಡೆ ಕೊರೊನಾ ವೈರಸ್‌ ಸೋಂಕಿನ ಭೀತಿ ಎದುರಾಗಿದೆ. ಚೀನಾದಲ್ಲಿ ಹುಟ್ಟಿಕೊಂಡ ಈ ಮಾರಾಣಾಂತಿಕ ವೈರಸ್ ಇದೀಗ ವಿಶ್ವದ ಹಲವು ರಾಷ್ಟ್ರಗಳಿಗೆ ಹರಡಿದೆ. ಈ ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲಾ ರಾಷ್ಟ್ರಗಳು ಹರಸಾಹಸ ಪಡುತ್ತಿವೆ. ಭಾರತದಲ್ಲಿ ಒಂದೆರಡು ಪ್ರಕರಣಗಳು ಕಂಡಾಗ ಅಷ್ಟೇನು ಭಯಭೀತರಾಗಿರಲಿಲ್ಲ, ಆದರೆ ಇದೀಗ ಸಂಖ್ಯೆ 150 ದಾಟಿರುವುದು ದೇಶದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಕರ್ನಾಟಕ ಸರಕಾರ ಕೊರೊನಾ ವೈರಸ್‌ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು ಮಾರ್ಚ್‌ 31ರವರೆಗೆ ಮಾಲ್‌, ಥಿಯೇಟರ್ ಎಲ್ಲವನ್ನೂ ಬಂದ್‌ ಮಾಡಿ, ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಜನರು ಗುಂಪಾಗಿ ಸೇರದಂತೆ, ಯಾವುದೇ ಸಭೆ, ಸಮಾರಂಭಗಳನ್ನು ನಡೆಸದಂತೆ ಆದೇಶಿಸಲಾಗಿದೆ.